Publish Date: Wed, 07 Jul 2021 (09:57 IST)
Updated Date: Wed, 07 Jul 2021 (09:57 IST)
ರಾಂಚಿ: ಟೀಂ ಇಂಡಿಯಾದ ಎಷ್ಟೋ ಪ್ರತಿಭೆಗಳಿಗೆ ಸ್ಪೂರ್ತಿಯಾಗಿ, ಅಣ್ಣನಂತೆ ಬೆನ್ನ ಹಿಂದೆ ನಿಂತು ವೃತ್ತಿ ಜೀವನ ಕಟ್ಟಿಕೊಟ್ಟ ಮಾಜಿ ನಾಯಕ ಎಂಎಸ್ ಧೋನಿಗೆ ಇಂದು ಜನ್ಮದಿನದ ಸಂಭ್ರಮ.
ಧೋನಿ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು, ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ.
1981 ರ ಜುಲೈ 7 ರಂದು ರಾಂಚಿಯಲ್ಲಿ ಜನಿಸಿದ ಧೋನಿ ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾಕ್ಕೆ ರವೀಂದ್ರ ಜಡೇಜಾ, ಸುರೇಶ್ ರೈನಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ರಂತಹ ಪ್ರತಿಭಾವಂತರಿಗೆ ಸದಾ ಬೆನ್ನಲುಬಾಗಿ ನಿಂತಿದ್ದ ಧೋನಿ ಇಂದಿಗೂ ಭಾರತದ ಯಶಸ್ವೀ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಭಿಮಾನಿಗಳು, ಕ್ರಿಕೆಟಿಗರು ಪ್ರೀತಿಯಿಂದ ಕರೆಯುವ ಮಹಿಗೆ ಹ್ಯಾಪೀ ಬರ್ತ್ ಡೇ.
Krishnaveni K
Publish Date: Wed, 07 Jul 2021 (09:57 IST)
Updated Date: Wed, 07 Jul 2021 (09:57 IST)