Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾಗೆ ಸ್ಥಿರ ನಾಯಕ ಎಂಬುದೇ ಇಲ್ಲ ಎಂಬಂತಾಗಿದೆ. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ತಂಡ ಪ್ರಕಟಿಸಲಾಗಿದ್ದು, ಹೊಸ ನಾಯಕನ ನೇಮಕವಾಗಿದೆ.
ಜುಲೈ ಅಂತ್ಯಕ್ಕೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದ್ದು, ಏಕದಿನ ಸರಣಿ ಆಡಲಿದೆ. ಜುಲೈ 22 ರಿಂದ 27 ರವರೆಗೆ ಪಂದ್ಯಗಳು ನಡೆಯಲಿವೆ. ಈ ಸರಣಿಗೆ ಶಿಖರ್ ಧವನ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. ಖಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
ಆಲ್ ರೌಂಡರ್ ರವೀಂದ್ರ ಜಡೇಜಾಗೆ ಉಪನಾಯಕನ ಜವಾಬ್ಧಾರಿ ನೀಡಲಾಗಿದೆ. ಉಳಿದಂತೆ ರಿಷಬ್ ಪಂತ್ ಗೂ ರೆಸ್ಟ್ ನೀಡಲಾಗಿದೆ.
ತಂಡ ಇಂತಿದೆ: ಶಿಖರ್ ಧವನ್ (ನಾಯಕ), ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ ವಾಡ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶುಬ್ನಂ ಗಿಲ್, ಶ್ರೇಯಸ್ ಅಯ್ಯರ್, ಶ್ರಾದ್ಧೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ಮೊಹಮ್ಮದ್ ಸಿರಾಜ್, ಅರ್ಷ್ ದೀಪ್ ಸಿಂಗ್.