Publish Date: Tue, 21 Jul 2020 (10:22 IST)
Updated Date: Tue, 21 Jul 2020 (10:23 IST)
ಮುಂಬೈ: ಐಸಿಸಿಯೂ ಟಿ20 ವಿಶ್ವಕಪ್ ಆಯೋಜಿಸುವುದಿಲ್ಲ ಎಂದು ಘೋಷಿಸಿದ ಮೇಲೆ ಐಪಿಎಲ್ ಆಯೋಜನೆಗೆ ಇದ್ದಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಯಿತು ಎಂದು ನೀವಂದುಕೊಂಡಿದ್ದರೆ ತಪ್ಪು! ಐಪಿಎಲ್ ಗೆ ಇನ್ನೂ ಒಂದು ಅಡ್ಡಿ ಬಾಕಿ ಇದೆ.
ಅದೇನು ಗೊತ್ತಾ? ಪ್ರಸಕ್ತ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಬಾರಿಯ ಐಪಿಎಲ್ ನ್ನು ಯುಎಇ ದೇಶದಲ್ಲಿ ನಡೆಸಲು ಸಿದ್ಧತೆ ನಡೆಸಿದೆ. ಆದರೆ ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ಸಿಗಬೇಕಿದೆ.
ಐಪಿಎಲ್ ಆಯೋಜನೆ ಮಾಡುವ ಸಂಪೂರ್ಣ ನೀಲ ನಕ್ಷೆಯೊಂದಿಗೆ ಬಿಸಿಸಿಐ ಈಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ಮನವಿ ಪುರಸ್ಕೃತವಾಗಿ ಕೇಂದ್ರ ವಿದೇಶೀ ತಾಣದಲ್ಲಿ ಐಪಿಎಲ್ ನಡೆಸಲು ಒಪ್ಪಿಗೆ ನೀಡಿದರಷ್ಟೇ ಎಲ್ಲವೂ ಅಂದುಕೊಂಡಂತೇ ನಡೆಯಲಿದೆ.