ಮುಂಬೈ: 2011 ರ ವಿಶ್ವಕಪ್ ರ ಪಂದ್ಯಕ್ಕೆ ಮೊದಲು ರತಿಕ್ರೀಡೆಯಾಡುವಂತೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಂದಿನ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಸಲಹೆ ನೀಡಿದ್ದರಂತೆ!
ಹೀಗಂತ ಅವರೇ ತಮ್ಮ ದಿ ಬೇರ್ ಫೂಟ್ ಕೋಚ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 2011 ರ ವಿಶ್ವಕಪ್ ಪಂದ್ಯಾವಳಿ ವೇಳೆ ಪ್ರತೀ ಪಂದ್ಯಕ್ಕೆ ಮೊದಲು ಒತ್ತಡ ಮರೆತು ಉಲ್ಲಾಸದಿಂದ ಪಂದ್ಯ ಎದಿರುಗೊಳ್ಳಲು ಆಟಗಾರರಿಗೆ ಇಂತಹದ್ದೊಂದು ಸಲಹೆ ನೀಡಿದ್ದರಂತೆ.
ಆದರೆ ಇದು ಅಂದಿನ ಟೀಂ ಇಂಡಿಯಾ ಮುಖ್ಯ ಕೋಚ್ ಗ್ಯಾರಿ ಕಸ್ಟರ್ನ್ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಅವರ ಕ್ಷಮೆ ಕೇಳಿದ್ದೆ ಎಂದು ಆಪ್ಟನ್ ಬರೆದುಕೊಂಡಿದ್ದಾರೆ. ಲೈಂಗಿಕ ಕ್ರಿಯೆಯಿಂದ ಮನಸ್ಸು ಶಾಂತವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.