Publish Date: Fri, 13 Aug 2021 (10:16 IST)
Updated Date: Fri, 13 Aug 2021 (10:17 IST)
ಲಾರ್ಡ್ಸ್: ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಶತಕ ಗಳಿಸಿದ ಬಳಿಕ ರೂಮರ್ಡ್ ಗರ್ಲ್ ಫ್ರೆಂಡ್ ಅಥಿಯಾ ಶೆಟ್ಟಿ ಹಾಗೂ ಅವರ ತಂದೆ, ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಅಥಿಯಾ ರಾಹುಲ್ ಗೆ ಹಾರ್ಟ್ ಇಮೋಜಿ ಹಾಕಿ ಅಭಿನಂದನೆ ಸಲ್ಲಿಸಿದರೆ ಸುನಿಲ್ ಶೆಟ್ಟಿ ತಮ್ಮ ಮಗಳ ಗೆಳೆಯನಿಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.
ಮೆಕ್ಕಾ ಆಫ್ ಕ್ರಿಕೆಟ್ ಮೈದಾನದಲ್ಲಿ ಶತಕ ಗಳಿಸಿದ್ದಕ್ಕೆ ಅಭಿನಂದನೆಗಳು ಬಾಬ. ತುಂಬಾ ಚೆನ್ನಾಗಿ ಆಡಿದೆ. ಹಾಗೇ ನನಗೆ ನೀಡಿದ ಬರ್ತ್ ಡೇ ಗಿಫ್ಟ್ ಗೂ ಧನ್ಯವಾದ ಎಂದಿದ್ದಾರೆ. ಮೊನ್ನೆಯಷ್ಟೇ ಸುನಿಲ್ ಶೆಟ್ಟಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಈ ದಿನಕ್ಕೆ ರಾಹುಲ್ ವಿಶೇಷ ಉಡುಗೊರೆ ನೀಡಿ ತಮ್ಮ ಭಾವೀ ಮಾವನನ್ನು ಇಂಪ್ರೆಸ್ ಮಾಡಿದ್ದರು ಎನ್ನಲಾಗಿದೆ.