Publish Date: Mon, 09 Aug 2021 (08:53 IST)
Updated Date: Mon, 09 Aug 2021 (09:02 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವರುಣ ವಿಲನ್ ಆಗಿದ್ದಾನೆ. ಅಂತಿಮ ದಿನದಾಟವಿಡೀ ಮಳೆಯಿಂದಾಗಿ ವಾಶ್ ಔಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾ ಗೆಲ್ಲಬೇಕಾಗಿದ್ದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ನಾಲ್ಕನೇ ದಿನದಂತ್ಯಕ್ಕೆ 209 ರನ್ ಗಳ ಗುರಿ ಬೆನ್ನತ್ತುವಲ್ಲಿ 1 ವಿಕೆಟ್ ನಷ್ಟಕ್ಕೆ ಭಾರತ 52 ರನ್ ಗಳಿಸಿತ್ತು. ಗೆಲುವಿಗೆ ಇನ್ನು 157 ರನ್ ಗಳಿಸಿದ್ದರೆ ಸಾಕಿತ್ತು. ಒಂದು ವೇಳೆ ನಿನ್ನೆ ಅರ್ಧ ದಿನದ ಆಟವಾಡಿದ್ದರೂ ಭಾರತ ಗೆಲ್ಲುವ ಸಾಧ‍್ಯತೆಯಿತ್ತು.
ಆದರೆ ಮಳೆಗೆ ಅದೇನು ಕೋಪವಿತ್ತೋ ದಿನವಿಡೀ ಹಾಜರಿ ಹಾಕಿತ್ತು. ಇದರಿಂದಾಗಿ ಗೆಲ್ಲಬೇಕಿದ್ದ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಯಿತು. ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಈ ಪಂದ್ಯದ ಹೀರೋ ಕೆಎಲ್ ರಾಹುಲ್ ನಿರಾಸೆ ಹೊರಹಾಕಿದ್ದಾರೆ. ಅದ್ಭುತವಾಗಿ ಕೊನೆಗಾಣಬೇಕಾಗಿದ್ದ ಪಂದ್ಯ ಕೊನೆಗೆ ಡ್ರಾನಲ್ಲಿ ಅಂತ್ಯವಾಗಿದ್ದು ನಿಜಕ್ಕೂ ಬೇಸರವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಈ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ಅವರ ಕೊಡುಗೆಯೇ ಮುಖ್ಯವಾಗಿತ್ತು.