ಹೈದರಾಬಾದ್: ಬಾಲ್ ವಿರೂಪಗೊಳಿಸಿದ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಮುಜುಗರಕ್ಕೀಡಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸ್ಟೀವ್ ಸ್ಮಿತ್ ರಾಜೀನಾಮೆ ಇತ್ತ ಬೆನ್ನಲ್ಲೇ ಇದೀಗ ಆಸೀಸ್ ಉಪನಾಯಕ ಹೈದರಾಬಾದ್ ಸನ್ ರೈಸರ್ಸ್ ಪರ ಆಡುವ ಡೇವಿಡ್ ವಾರ್ನರ್ ಬಗ್ಗೆ ಪ್ರಶ್ನೆ ಮೂಡಿದೆ.
ಡೇವಿಡ್ ವಾರ್ನರ್ ರನ್ನು ಹೈದರಾಬಾದ್ ತಂಡ ಹೊರಗಿಡುವ ಧೈರ್ಯ ಮಾಡುತ್ತಾ ಎಂಬ ಪ್ರಶ್ನೆಗೆ ಕೋಚ್, ಮೆಂಟರ್ ವಿವಿಎಸ್ ಲಕ್ಷ್ಮಣ್ ಉತ್ತರಿಸಿದ್ದಾರೆ. ಸದ್ಯಕ್ಕೆ ವಾರ್ನರ್ ರನ್ನು ತಂಡದಿಂದ ಹೊರಗಿಡುವ ಬಗ್ಗೆ ಯೋಚನೆ ನಡೆಸಿಲ್ಲ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ತೀರ್ಮಾನ ನೋಡಿಕೊಂಡು ಮುಂದಿನ ಹೆಜ್ಜೆಯಿಡುವುದಾಗಿ ಹೇಳಿದ್ದಾರೆ.
ಈಗಲೇ ವಾರ್ನರ್ ಭಾಗವಹಿಸುವಿಕೆ ಬಗ್ಗೆ ನಿರ್ಧಾರ ತಿಳಿಸುವುದು ಆತುರದ ನಿರ್ಧಾರವಾಗುತ್ತದೆ. ಕ್ರಿಕೆಟ್ ಆಸ್ಟ್ರೇಲಿಯಾ ಏನು ಕ್ರಮ ಕೈಗೊಳ್ಳುತ್ತದೋ ನೋಡಿಕೊಂಡು ಮುಂದಿನ ಹೆಜ್ಜೆಯಿಡುತ್ತೇವೆ ಎಂದು ಲಕ್ಷ್ಮಣ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ವಾರ್ನರ್ ಇಲ್ಲದೇ ಹೋದರೆ ಹೈದಾರಾಬದ್ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ