ದೆಹಲಿ: ವಾಯು ಮಾಲಿನ್ಯದಿಂದಾಗಿ ಶ್ರೀಲಂಕಾ ಆಟಗಾರರು ಪದೇ ಪದೇ ಆಟ ನಿಲ್ಲಿಸಿದಾಗ ಅಸಹನೆಗೊಂಡು 537 ಕ್ಕೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಟೀಂ ಇಂಡಿಯಾ ತಪ್ಪು ಮಾಡಿತಾ?!
ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಪ್ರಥಮ ಇನಿಂಗ್ಸ್ ನಲ್ಲಿ ಶ್ರೀಲಂಕಾ ಇಂದು ದಿನವಿಡೀ ವಿಕೆಟ್ ಕಳೆದುಕೊಳ್ಳದೇ ಭೋಜನ ವಿರಾಮದವರೆಗೆ ಯಶಸ್ವಿಯಾಗಿ ಇನಿಂಗ್ಸ್ ಕಟ್ಟುತ್ತಿರುವುದನ್ನು ನೋಡಿದರೆ ಇಂತಹದ್ದೊಂದು ಪ್ರಶ್ನೆ ಏಳುವುದು ಸಹಜ.
ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ ಲಂಕಾ 192 ರನ್ ಗಳಿಸಿದೆ. ನಾಯಕ ಚಂಡಿಮಾಲ್ (52) ಮತ್ತು ಮಾಜಿ ನಾಯಕ ಆಂಜಲೋ ಮ್ಯಾಥ್ಯೂಸ್ (90) ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಒದಗಿಸುತ್ತಿದ್ದಾರೆ. ಜಿಗುಟು ಆಟವಾಡುತ್ತಿರುವ ಲಂಕಾ ಬ್ಯಾಟ್ಸ್ ಮನ್ ಗಳು ಭಾರತೀಯ ಬೌಲರ್ ಗಳಿಗೆ ಸವಾಲಾಗಿದ್ದಾರೆ. ಭಾರತದ ಪ್ರಥಮ ಇನಿಂಗ್ಸ್ ಮೊತ್ತ ದಾಟಲು ಲಂಕಾಗೆ ಇನ್ನು 344 ರನ್ ಅಗತ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ