ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಆರಂಭದ ದಿನಗಳಲ್ಲಿ ಬಡತನದಿಂದಲೇ ಮೇಲೆ ಬಂದವರು. ಹಿಂದೊಮ್ಮೆ ತಾವು ಎದುರಿಸಿದ ಪಾಡನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ನಮ್ಮ ಬಳಿ ಒಂದು ಸಮಯದಲ್ಲಿ ಕಾರು ಖರೀದಿಸಿದ್ದಕ್ಕೆ ಇಎಂಐ ಪಾವತಿಸಲು ಹಣವಿರಲಿಲ್ಲ. ಆದರೆ ಆ ಕಾರನ್ನು ಅವರು ಮರಳಿ ತೆಗೆದುಕೊಂಡು ಹೋಗಬಾರದೆಂದು ಎರಡು ವರ್ಷ ಯಾರ ಕಣ್ಣಿಗೂ ಬೀಳದಂತೆ ಅಡಗಿಸಿಟ್ಟಿದ್ದೆವು’ ಎಂದು ಪಾಂಡ್ಯ ಹೇಳಿದ್ದಾರೆ.
ಈ ಸಂದರ್ಶನದಲ್ಲಿ ಅವರು ತಾನು ಮತ್ತು ಸಹೋದರ ಕೃನಾಲ್ ಪಾಂಡ್ಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ತಳವೂರಲು ಪಟ್ಟ ಕಷ್ಟಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ