ದೆಹಲಿ: ಶತಕ ಗಳಿಸುವುದು ಇಷ್ಟು ಸುಲಭವೇ? ಹಾಗೆಂದು ವಿರಾಟ್ ಕೊಹ್ಲಿಯ ಆಟ ನೋಡಿದರೆ ಅನಿಸುವುದು ಸಹಜ. ಲೀಲಾಜಾಲವಾಗಿ ಮತ್ತೊಂದು ದ್ವಿಶತಕ ಹೊಡೆದ ಕೊಹ್ಲಿಯ ಅಬ್ಬರದಿಂದಾಗಿ ಲಂಕಾ ವಿರುದ್ಧ ಟೀಂ ಇಂಡಿಯಾ ದ್ವಿತೀಯ ದಿನ ಊಟದ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 500 ರನ್ ಗಳಿಸಿದೆ.
ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಬಾಳ್ವೆಯ 6 ನೇ ದ್ವಿಶತಕ ಹೊಡೆದರು. ಅಷ್ಟೇ ಅಲ್ಲ, ನಾಯಕನಾಗಿ ಅತೀ ಹೆಚ್ಚು ದ್ವಿಶತಕ ದಾಖಲಿಸಿದ ಬ್ರಿಯಾನ್ ಲಾರಾ ದಾಖಲೆಯನ್ನು ಮುರಿದರು. ಸದ್ಯ 225 ರನ್ ಗಳಿಸಿ ಕ್ರೀಸ್ ನಲ್ಲಿರುವ ಕೊಹ್ಲಿ ತ್ರಿಶತಕ ಗಳಿಸಿದರೂ ಅಚ್ಚರಿಯಿಲ್ಲ.
ಊಟದ ವಿರಾಮಕ್ಕೆ ಮೊದಲು ಕೊನೆಯ ಓವರ್ ನಲ್ಲಿ ರೋಹಿತ್ ಶರ್ಮಾ 65 ರನ್ ಗಳಿಸಿದ್ದ ರೋಹಿತ್ ಶರ್ಮಾ ಸಂಡಕನ್ ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ