Publish Date: Fri, 16 Jul 2021 (12:15 IST)
Updated Date: Fri, 16 Jul 2021 (10:16 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಸೋಲನುಭವಿಸಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಒಂದೇ ಪಂದ್ಯದ ಸೋಲಿನಿಂದ ಈ ತಂಡದ ಸಾಮರ್ಥ್ಯವನ್ನು ಅಳೆಯಬೇಡಿ ಎಂದು ಗಂಗೂಲಿ ಹೇಳಿದ್ದಾರೆ. ಒಂದೇ ಒಂದು ಪಂದ್ಯದಿಂದ ತಂಡ ಕಳಪೆಯೋ, ಗುಣಮಟ್ಟದೋ ಎಂದು ಹೇಳಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಯೂರೋ ಕಪ್ ವೀಕ್ಷಿಸಲು ತೆರಳಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಮಾಸ್ಕ್ ಇಲ್ಲದೇ ಓಡಾಡಿದ್ದನ್ನೂ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ. ಎಲ್ಲಾ ಸಂದರ್ಭದಲ್ಲಿಯೂ ಮಾಸ್ಕ್ ಧರಿಸಿಯೇ ಓಡಾಡುವುದು ಕಷ್ಟ ಎಂದು ಟೀಂ ಇಂಡಿಯಾ ಕ್ರಿಕೆಟಿಗರ ಪರ ಬ್ಯಾಟ್ ಮಾಡಿದ್ದಾರೆ.