Publish Date: Thu, 15 Jul 2021 (10:40 IST)
Updated Date: Thu, 15 Jul 2021 (10:42 IST)
ಲಂಡನ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಭ್ಯಾಸ ಪಂದ್ಯವಾಡಲಿದೆ.
ಈ ಮೊದಲು ಕೊರೋನಾ ಕಾರಣದಿಂದಾಗಿ ಅಭ್ಯಾಸ ಪಂದ್ಯವಿಲ್ಲ ಎನ್ನಲಾಗುತ್ತಿತ್ತು. ಕೇವಲ ಇಂಟ್ರಾಸ್ಕ್ವಾಡ್ ಮ್ಯಾಚ್ ನಡೆಯಲಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಬಿಸಿಸಿಐ ಮನವಿ ಮೇರೆಗೆ ಇಂಗ್ಲೆಂಡ್ ಮಂಡಳಿ ಅಭ್ಯಾಸ ಪಂದ್ಯ ನಡೆಸಲು ತೀರ್ಮಾನಿಸಿದೆ.
ಜುಲೈ 20 ರಿಂದ 22 ರವರೆಗೆ ಕೌಂಟಿ ಚಾಂಪಿಯನ್ ಇಲೆವೆನ್ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವಾಡಲಿದೆ. ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದೆ.