Publish Date: Thu, 15 Jul 2021 (10:22 IST)
Updated Date: Thu, 15 Jul 2021 (10:23 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕೊರೋನಾ ಆತಂಕ ಕಾಣಿಸಿಕೊಂಡಿದೆ. ಓರ್ವ ಕ್ರಿಕೆಟಿಗನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದನ್ನು ಸ್ವತಃ ಬಿಸಿಸಿಐ ದೃಢಪಡಿಸಿದೆ.
ಆದರೆ ಯಾವ ಕ್ರಿಕೆಟಿಗ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಇತ್ತೀಚೆಗೆ ಯೂರೋ ಕಪ್ ಫುಟ್ ಬಾಲ್ ಪಂದ್ಯದ ವೀಕ್ಷಣೆಗೆ ತೆರಳಿದ್ದ ಕ್ರಿಕೆಟಿಗನಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಈ ಕ್ರಿಕೆಟಿಗ ಈಗ ತಾವಿರುವ ಡುಹ್ರಾಂನಲ್ಲಿಯೇ ಕ್ವಾರಂಟೈನ್ ಗೊಳಗಾಗಿದ್ದಾರೆ.
ಇನ್ನು, ಕೊರೋನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಎಲ್ಲೆಂದರಲ್ಲಿ ತಿರುಗಾಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.