Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ದಾಖಲೆಯೊಂದನ್ನು ಮಾಡುವ ಹಂತದಲ್ಲಿದ್ದಾರೆ.
ಧವನ್ ಇನ್ನು 17 ರನ್ ಗಳಿಸಿದರೆ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 1000 ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದಕ್ಕೂ ಮೊದಲು ಅವರು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ 1000 ರನ್ ಗಳಿಸಿದ ದಾಖಲೆ ಮಾಡಿದ್ದಾರೆ.
ಇನ್ನು, ಇಂದಿನ ಪಂದ್ಯದಲ್ಲೇ ಈ ದಾಖಲೆ ಮಾಡಿದರೆ ಅತೀ ವೇಗವಾಗಿ 1000 ರನ್ ಗಳಿಸಿದ ದಾಖಲೆಗೆ ಭಾಜನರಾಗಲಿದ್ದಾರೆ. ಇದಕ್ಕೂ ಮೊದಲು ದ.ಆಫ್ರಿಕಾದ ಹಶೀಮ್ ಆಮ್ಲಾ 18 ಇನಿಂಗ್ಸ್ ಗಳಿಂದ ಈ ದಾಖಲೆ ಮಾಡಿದ್ದರು. ಇಂದು ಧವನ್ ಗೆ ಅದನ್ನು ಮುರಿಯುವ ಅವಕಾಶವಿದೆ.