ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಉದ್ಘಾಟನಾ ವರ್ಷ ಅಂದರೆ 2008 ರಲ್ಲಿ ನಡೆದ ಮೊದಲ ಸೀಸನ್‌ನ ವಿಜೇತರಾಗಲು ರಾಜಸ್ಥಾನ್ ರಾಯಲ್ಸ್‌ಗೆ ಅಂದು ಬೆಂಬಲವಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಲೆಗ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ಏಪ್ರಿಲ್ 7 ರಿಂದ ಪ್ರಾರಂಭವಾಗಲಿರುವ ಶ್ರೀಮಂತ ಲೀಗ್‌ನ 11ನೇ ಆವೃತ್ತಿಗೆ ಮರಳುತ್ತಿರುವುದನ್ನು ಖಚಿತಪಡಿಸಿದ್ದಾರೆ; ಆದಾಗ್ಯೂ ವಾರ್ನ್ ಇನ್ನೂ ವಿವರಗಳನ್ನು ಬಹಿರಂಗಪಡಿಸಬೇಕಿದೆ.
“ಈ ವಾರ ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಇದು #ಐಪಿಎಲ್2018 (#IPL2018) ಕುರಿತಾಗಿದೆ ಎಂಬುದನ್ನು ನಿಮ್ಮೆಲ್ಲರಿಗೂ ತಿಳಿಸಲು ನಾನು ಎದುರು ನೋಡುತ್ತಿದ್ದೇನೆ!” ಈ ರೀತಿಯಾಗಿ ಎರಡು ದಿನಗಳ ಹಿಂದೆ ವಾರ್ನ್ ಟ್ವೀಟ್ ಮಾಡಿದ್ದರು.
ವಾರ್ನ್ ಐಪಿಎಲ್ ಅನ್ನು ಕೊನೆಯದಾಗಿ 2011 ರ ಆವೃತ್ತಿಯಲ್ಲಿ ಆಡಿದ್ದರು, ಅಂದಿನಿಂದ ಅವರು ವೀಕ್ಷಕ ವಿವರಣೆಗಾರರಾಗಿ ಮೈಕ್ ಹಿಡಿದಿದ್ದರು.
ಈ ನಡುವೆ 2013 ರಲ್ಲಿ ಲೀಗ್‌ಗೆ ಆರೋಪ ಮತ್ತು ಕಳಂಕ ತಂದಿದ್ದ ಭ್ರಷ್ಟಾಚಾರ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ನಿಷೇಧದ ಅವಧಿಯನ್ನು ಪೂರ್ಣಗೊಳಿಸಿ ರಾಜಸ್ಥಾನ್ ಫ್ರಾಂಚೈಸ್ ಐಪಿಎಲ್‌ಗೆ ಮರಳಿದ್ದಾರೆ.
ರಾಜಸ್ಥಾನ್ ಜೊತೆಗೆ, ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಎರಡು ವರ್ಷಗಳ ನಿಷೇಧದ ಅವಧಿಯನ್ನು ಪೂರ್ಣಗೊಳಿಸಿದೆ ಮತ್ತು ಈ ವರ್ಷದ ಐಪಿಎಲ್‌ಗೆ ಮರಳಿದೆ.
ಲೀಗ್‌ನ 11ನೇ ಆವೃತ್ತಿಯು 2018 ಏಪ್ರಿಲ್ 7 ರಿಂದ ಪ್ರಾರಂಭವಾಗಿ ಮೇ 27 ರಂದು ಪೂರ್ಣಗೊಳ್ಳಲಿದೆ.