Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಪೋರ್ನ್ ನಟಿಗೆ ಪಂಚ್ ಮಾಡಿದ ಆರೋಪದಡಿ ಶೇನ್ ವಾರ್ನ್ ವಿರುದ್ಧ ದೂರು ದಾಖಲಾಗಿದೆ.
ಲಂಡನ್ ನೈಟ್ ಕ್ಲಬ್`ನಲ್ಲಿ ಪೋರ್ನ್ ಸ್ಟಾರ್ ವಲೇರಿಯಾ ಫಾಕ್ಸ್ ಮುಖಕ್ಕೆ ಪಂಚ್ ಕೊಟ್ಟ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿರುವ ಫಾಕ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಶೇರ್ ಮಾಡಿದ್ದಾಳೆ. ದುಷ್ಟ ಕ್ರಿಮಿ, ಮಹಿಳೆಗೆ ಗುದ್ದುವುದು ನಿನಗೆ ಹೆಮ್ಮೆ ವಿಷಯವೇ ಎಂದು ಪ್ರಶ್ನಿಸಿದ್ದಾಲೆ.
ದಿ ಸನ್ ವರದಿ ಪ್ರಕಾರ, ಪ್ರತ್ಯಕ್ಷದರ್ಶಿಗಳು ಸಹ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಶೇನ್ ವಾರ್ನ್, ಫಾಕ್ಸ್ ಮೇಲೆ ಹಲ್ಲೆ ನಡೆಸಿದ್ದು, ಮುಖವನ್ನ ಹಿಡಿದುಕೊಂಡು ಫಾಕ್ಸ್ ನೆಲದ ಮೇಲೆ ಬಿದ್ದಿದ್ದಾಳೆ. ಸಿಸಿಟಿವಿ ವಿಡಿಯೋ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ