Publish Date: Sat, 29 Jan 2022 (08:15 IST)
Updated Date: Sat, 29 Jan 2022 (08:20 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಕೇವಲ ಭಾರತೀಯ ತಾರೆಯರನ್ನು ಮಾತ್ರವಲ್ಲ, ಬಾಂಗ್ಲಾ ಕ್ರಿಕೆಟಿಗರನ್ನೂ ಇಂಪ್ರೆಸ್ ಮಾಡಿದೆ.
ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿಕೆಟ್ ಪಡೆದ ಸಂಭ್ರಮಾಚರಣೆ ವೇಳೆ ಪುಷ್ಪ ಸ್ಟೆಪ್ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಮೂಲಕ ಪುಷ್ಪ ಬಾಂಗ್ಲಾ ಆಟಗಾರರನ್ನೂ ಆಕರ್ಷಿಸಿದೆ ಎನ್ನಬಹುದು.
ಈಗಾಗಲೇ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ, ಶಿಖರ್ ಧವನ್ ಮುಂತಾದವರು ಪುಷ್ಪ ಸಿನಿಮಾದ ಸಿಗ್ನೇಚರ್ ಸ್ಟೆಪ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದರು. ಇದೀಗ ಬಾಂಗ್ಲಾ ಕ್ರಿಕೆಟಿಗರ ಸರದಿ.
Krishnaveni K
Publish Date: Sat, 29 Jan 2022 (08:15 IST)
Updated Date: Sat, 29 Jan 2022 (08:20 IST)