Publish Date: Wed, 26 Jan 2022 (08:55 IST)
Updated Date: Wed, 26 Jan 2022 (09:16 IST)
ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಪುಷ್ಪ 2 ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದೆ.
ಹಾಗಿದ್ದರೂ ಈ ಸಿನಿಮಾಗಿರುವ ಹೈಪ್ ಭರ್ಜರಿಯಾಗಿದೆ. ಪುಷ್ಪ 1 ಭರ್ಜರಿ ಹಿಟ್ ಆದ ಬಳಿಕ ಪುಷ್ಪ 2 ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ.
ಇದೀಗ ಪುಷ್ಪ 2 ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ 400 ಕೋಟಿ ರೂ. ಆಫರ್ ಬಂದಿದೆಯಂತೆ! ಖ್ಯಾತ ನಿರ್ಮಾಣ ಸಂಸ್ಥೆಯೊಂದು ಚಿತ್ರದ ಹಕ್ಕು ಖರೀದಿಸಲು 400 ಕೋಟಿ ರೂ. ಆಫರ್ ಮಾಡಿದೆ ಎಂಬ ಸುದ್ದಿಬಂದಿದೆ. ಒಟಿಟಿ, ಸ್ಯಾಟ್ ಲೈಟ್ ಹಕ್ಕಿಗೆ ಭರ್ಜರಿ ಮೊತ್ತದ ಬೇಡಿಕೆ ಬರುವುದು ಗ್ಯಾರಂಟಿ. ಹೀಗಾಗಿ ಶೂಟಿಂಗ್ ಹಂತದಲ್ಲಿರುವಾಗಲೇ ಪುಷ್ಪ 2 ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ ಎನ್ನಬಹುದು.