Select Your Language

Notifications

webdunia
webdunia
webdunia
webdunia

‘ಏನಿವಾಗ?’ ಟೀಕಾಕಾರರಿಗೆ ತಿರುಗೇಟು ಕೊಟ್ಟ ಕ್ರಿಕೆಟಿಗ ಮೊಹಮ್ಮದ್ ಶಮಿ

‘ಏನಿವಾಗ?’ ಟೀಕಾಕಾರರಿಗೆ ತಿರುಗೇಟು ಕೊಟ್ಟ ಕ್ರಿಕೆಟಿಗ ಮೊಹಮ್ಮದ್ ಶಮಿ
ಮುಂಬೈ , ಶುಕ್ರವಾರ, 28 ಜನವರಿ 2022 (10:47 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ  ಕಳೆದ ಎರಡು ವರ್ಷಗಳಿಂದ ಶತಕ ಗಳಿಸಿಲ್ಲ ಎನ್ನುವುದು ಟೀಕಾಕಾರರಿಗೆ ಅಸ್ತ್ರವಾಗಿದೆ. ಈ ಬಗ್ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ, ಕೊಹ್ಲಿ ಶತಕ ಗಳಿಸಿರದ ಬಗ್ಗೆ ಪ್ರಶ್ನಿಸಿದಾಗ ‘ಅವರು ಶತಕ ಗಳಿಸಿಲ್ಲ ಎಂದರೆ ಏನಿವಾಗ?’ ಎಂದು ಮರು ಪ್ರಶ್ನಿಸಿದ್ದಾರೆ.

‘ಒಬ್ಬ ಆಟಗಾರನ ಶ್ರೇಷ್ಠತೆ ಶತಕದಿಂದ ಅಳೆಯುವುದಲ್ಲ. ಶತಕ ಗಳಿಸಿದರೆ ಮಾತ್ರ ಅವರು ಶ್ರೇಷ್ಠ ಆಟಗಾರ ಎಂದು ಅರ್ಥವಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಸಾಕಷ್ಟು ಅರ್ಧಶತಕ ಗಳಿಸಿದ್ದಾರೆ. ಅದು ತಂಡಕ್ಕೆ ಸಹಾಯ ಮಾಡಿರುವಾಗ ಶತಕವನ್ನೇ ಉಲ್ಲೇಖಿಸಿ ದೂರುವುದು ತಪ್ಪು’ ಎಂದು ಶಮಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕೋಚ್ ರವಿಶಾಸ್ತ್ರಿ ಕಾಮೆಂಟರಿ ಪ್ಯಾನೆಲ್ ನಲ್ಲೂ ಸ್ಥಾನವಿಲ್ಲ!