Publish Date: Sun, 01 Jul 2018 (09:15 IST)
Updated Date: Sun, 01 Jul 2018 (09:17 IST)
ಮುಂಬೈ: ಇತ್ತೀಚೆಗಷ್ಟೇ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಫಿಟ್ನೆಸ್ ಚಾಲೆಂಜ್ ಶುರು ಮಾಡಿ ಭಾರೀ ವೈರಲ್ ಆಗಿತ್ತು. ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೊಸದೊಂದು ಚಾಲೆಂಜ್ ಶುರು ಮಾಡಿದ್ದಾರೆ.
ಅದು ಕಿಟ್ ಅಪ್ ಚಾಲೆಂಜ್. ಅಂದರೆ ತಮ್ಮ ಕ್ರೀಡಾ ಪರಿಕರಗಳನ್ನು ಕಟ್ಟಿಕೊಂಡು ನೆಚ್ಚಿನ ಆಟವನ್ನು ಆಡಿ ವಿಡಿಯೋ ಅಪ್ ಲೋಡ್ ಮಾಡುವುದು. ಸಚಿನ್ ತಮ್ಮ ಕ್ರಿಕೆಟ್ ಪ್ಯಾಡ್ ಕಟ್ಟಿಕೊಂಡು ವಿಡಿಯೊ ಅಪ್ ಲೋಡ್ ಮಾಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮುಂತಾದವರಿಗೆ ಸವಾಲು ಹಾಕಿದ್ದರು.
ಅದರಂತೆ ಸಚಿನ್ ಸವಾಲು ಸ್ವೀಕರಿಸಿದ ವಿರಾಟ್ ಕೊಹ್ಲಿ ಮತ್ತು ಸಿಂಧು ತಮ್ಮ ಮೆಚ್ಚಿನ ಕ್ರೀಡಾ ಪರಿಕರಗಳನ್ನು ತೊಟ್ಟುಕೊಂಡು ಅದನ್ನು ಆಡುವ ವಿಡಿಯೋ ಅಪ್ ಲೋಡ್ ಮಾಡಿ ಚಾಲೆಂಜ್ ಪೂರ್ಣಗೊಳಿಸಿದ್ದಾರೆ.
ಕೊಹ್ಲಿ ತಾವು ಚಾಲೆಂಜ್ ಪೂರ್ಣಗೊಳಿಸಿದ ಬಳಿಕ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಗೆ ಸವಾಲು ಹಾಕಿದ್ದಾರೆ. ಅತ್ತ ಸಿಂಧು ತಮ್ಮ ಬ್ಯಾಡ್ಮಿಂಟನ್ ಸಹ ಆಟಗಾರ ಶ್ರೀಕಾಂತ್, ಕುಸ್ತಿ ಪಟು ಸುಶೀಲ್ ಕುಮಾರ್ ಗೆ ಸವಾಲು ಸ್ವೀಕರಿಸಲು ಹೇಳಿದ್ದಾರೆ. ಅಂತೂ ಈ ಕಿಟ್ ಅಪ್ ಚಾಲೆಂಜ್ ಮುಂದಿನ ದಿನಗಳಲ್ಲಿ ಎಷ್ಟು ಫೇಮಸ್ಸು ಆಗುತ್ತೋ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Sun, 01 Jul 2018 (09:15 IST)
Updated Date: Sun, 01 Jul 2018 (09:17 IST)