ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಸರಣಿಗೆ ಮೊದಲು ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ ತೀವ್ರ ಒತ್ತಡದಲ್ಲಿದ್ದರು.
ರೋಹಿತ್ ಐಪಿಎಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದಂತಲ್ಲ ಟೀಂ ಇಂಡಿಯಾವನ್ನು ಮುನ್ನಡೆಸುವುದು ಎಂದು ಟೀಕೆಗಳು ಕೇಳಿ ಬಂದಿತ್ತು. ಆದರೆ ದ್ವಿತೀಯ ಏಕದಿನ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ತಾವೇ ಹೆಗಲ ಮೇಲೆ ಹೊತ್ತುಕೊಂಡ ರೋಹಿತ್ ಶರ್ಮಾ ಟೀಂ ಇಂಡಿಯಾದ ಇನಿಂಗ್ಸ್ ಪೂರ್ತಿ ಆವರಿಸಿಕೊಂಡರು.
ಕೊಹ್ಲಿ ಶತಕ ಭಾರಿಸುವುದರಲ್ಲಿ ನಿಸ್ಸೀಮನಾದರೆ ರೋಹಿತ್ ತಮಗೆ ಅದೇ ಶತಕವನ್ನು ದ್ವಿಶತಕವಾಗಿ ಪರಿವರ್ತಿಸುವುದು ಎಷ್ಟು ಸುಲಭ ಎಂದು ತೋರಿಸಿಕೊಟ್ಟರು. ಶತಕವಾದ ಮೇಲೆ ಗೇರ್ ಬದಲಾಯಿಸಿದ ರೋಹಿತ್ ಕೇವಲ 35 ಎಸೆತಗಳಲ್ಲಿ ದ್ವಿಶತಕ ಭಾರಿಸಿಯೇಬಿಟ್ಟರು.
ಅವರ ಹೊಡೆತಗಳಲ್ಲಿ ಸುಸ್ತು ಎನ್ನುವುದು ಲವಲೇಶವೂ ಇರಲಿಲ್ಲ. ಲೀಲಾಜಾಲವಾಗಿ ಇನಿಂಗ್ಸ್ ಮುಗಿಸಿದ ರೋಹಿತ್ ಮುಖದಲ್ಲಿ ದೊಡ್ಡದೊಂದು ಜವಾಬ್ದಾರಿ ನಿಭಾಯಿಸಿದ ಆರಾಮವಿತ್ತು. ನಾಯಕನಾಗಿ ದ್ವಿಶತಕ ಭಾರಿಸಿದ ಎರಡನೇ ಆಟಗಾರ ರೋಹಿತ್. ಈ ಗೆಲುವಿನ ಮೂಲಕ ಸದ್ಯಕ್ಕೆ ಮದುವೆಯ ಸಂಭ್ರಮದಲ್ಲಿರುವ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ತಕ್ಕ ಉಡುಗೊರೆ ಕೊಟ್ಟಿದ್ದಾರೆ ರೋಹಿತ್ ಆಂಡ್ ಟೀಂ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ