ಭಾರತ ತಂಡದ ಯಶಸ್ವಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರಸಿಂಗ್ ಧೋನಿ ಹಲವಾರು ದಾಖಲೆಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ಇದೀಗ ತಮ್ಮ ದಾಖಲೆಗಳ ಪಟ್ಟಿಗೆ ಇನ್ನೊಂದು ದಾಖಲೆಯನ್ನು ಸೇರಿಸುವ ಅವಕಾಶ ಧೋನಿ ಹೊಂದಿದ್ದಾರೆ.
310 ಏಕದಿನ ಪಂದ್ಯಗಳಿಂದ 9,891 ರನ್ ಗಳಿಸಿರುವ ಮಾಜಿನಾಯಕ, ಏಕದಿನ ಪಂದ್ಯಗಳಲ್ಲಿ 10,000 ರನ್ ಗಳಿಸಲು 109 ರನ್‌ಗಳು ಬೇಕಾಗಿವೆ. ಒಂದು ವೇಳೆ, ಇಂದಿನ ಭಾರತ-ಶ್ರೀಲಂಕಾ ಪಂದ್ಯದಲ್ಲಿ 109 ರನ್ ಗಳಿಸಿದರೆ ಏಕದಿನ ಪಂದ್ಯದಲ್ಲಿ 10,000 ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ, ಇದರೊಂದಿಗೆ ಏಕದಿನ ಪಂದ್ಯಗಳಲ್ಲಿ ವೇಗದ 10,000 ರನ್ ಗಳಿಸಿದ ಏಳನೇಯ ಆಟಗಾರರಾಗಲಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್, ಗಂಗೂಲಿ ಮತ್ತು ದ್ರಾವಿಡ್ ಅವರ ನಂತರ ಈ ಸಾಧನೆ ಮಾಡಿದ ಭಾರತದ ನಾಲ್ಕನೇಯ ಆಟಗಾರ ಹಾಗೂ ವಿಶ್ವದ ಹನ್ನೆರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಇನ್ನು ಇದೇ ಪಂದ್ಯದಲ್ಲಿ ಏಂಜಲೋ ಮ್ಯಾಥ್ಯೂಸ್ 63 ರನ್ ಗಳಿಸಿದರೆ, ಏಕದಿನ ಪಂದ್ಯಗಳಲ್ಲಿ 5,000 ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ಶ್ರೀಲಂಕಾದ 10ನೇ ಆಟಗಾರರಾಗಲಿದ್ದಾರೆ. ಏಂಜಲೋ ಮ್ಯಾಥ್ಯೂಸ್ 194 ಪಂದ್ಯಗಳಿಂದ 4937 ರನ್‌ಗಳನ್ನು ಪೇರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.