Publish Date: Sat, 04 Sep 2021 (17:18 IST)
Updated Date: Sat, 04 Sep 2021 (17:19 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ.
42 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕನಾಗಿ 11 ಸಾವಿರ ರನ್ ಗಳಿಸಿದ ಅಪರೂಪದ ಸಾಧನೆ ಮಾಡಿದರು.
ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಕ್ರಿಕೆಟಿಗ ಎಂಬ ದಾಖಲೆ ಅವರದ್ದಾಯಿತು. ಆದರೆ ಅತೀ ವೇಗವಾಗಿ ಈ ದಾಖಲೆ ಮಾಡಿದವರು ರೋಹಿತ್. ಮೊದಲ ಸ್ಥಾನದಲ್ಲಿದ್ದ ಸಚಿನ್ ತೆಂಡುಲ್ಕರ್ 246 ಪಂದ್ಯಗಳಿಂದ ಈ ದಾಖಲೆ ಮಾಡಿದ್ದರು. ರೋಹಿತ್ 241 ಪಂದ್ಯಗಳಿಂದ ಈ ದಾಖಲೆ ಮಾಡಿದ್ದಾರೆ.