ಲಂಡನ್: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ. ಕೊಹ್ಲಿಗೆ ಅಶ್ವಿನ್ ಮೇಲೆ ವೈಯಕ್ತಿಕ ಅಸಮಾಧಾನವಿದೆ. ಇದೇ ಕಾರಣಕ್ಕೆ ಇಲ್ಲ ಸಲ್ಲದ ವಿಚಾರವಿಟ್ಟುಕೊಂಡು ಅವರನ್ನು ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ!
ಹೀಗಂತ ಮಾಜಿ ಕ್ರಿಕೆಟಿಗ, ಕ್ರಿಕೆಟ್ ವಿಶ್ಲೇಷಕ ನಿಕ್ ಕಾಂಪ್ಟನ್ ಆರೋಪಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಎಡಗೈ ಬ್ಯಾಟ್ಸ್ ಮನ್ ಗಳೇ ಅಧಿಕವಿದ್ದಾರೆ. ಜಡೇಜಾ ಎಡಗೈ ಬ್ಯಾಟ್ಸ್ ಮನ್ ಗಳ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವರನ್ನು ಹೊರಗಿಟ್ಟಿರುವುದಾಗಿ ಕೊಹ್ಲಿ ಸಮಾಜಾಯಿಷಿ ಕೊಟ್ಟಿದ್ದಾರೆ.
ಆದರೆ ಎಡಗೈ ಬ್ಯಾಟ್ಸ್ ಮನ್ ಗಳ ವಿರುದ್ಧ ವಿಶ್ವ ನಂ.2 ಬೌಲರ್ ಅಶ್ವಿನ್ ದಾಖಲೆಯೂ ಉತ್ತಮವಾಗಿದೆ. ಹಾಗಿದ್ದರೂ ಅವರನ್ನು ತಂಡದಿಂದ ಹೊರಗಿಟ್ಟಿದ್ದಾರೆ ಎಂದರೆ ಅವರಿಗೆ ಅಶ್ವಿನ್ ಮೇಲೆ ವೈಯಕ್ತಿಕ ಭಿನ್ನಾಭಿಪ್ರಾಯವಿರಬೇಕು ಎಂದು ಕಾಂಪ್ಟನ್ ಆರೋಪಿಸಿದ್ದಾರೆ.