Publish Date: Sat, 04 Sep 2021 (10:59 IST)
Updated Date: Sat, 04 Sep 2021 (11:01 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮೈದಾನದಲ್ಲೇ ಅಭಿಮಾನಿ ತಂದ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.
ನಿನ್ನೆ ಶಮಿ ಜನ್ಮದಿನವಿತ್ತು. ಪಂದ್ಯ ವೀಕ್ಷಿಸಲು ಬಂದಿದ್ದ ಅವರ ಅಭಿಮಾನಿಯೊಬ್ಬರು ಕೇಕ್ ತಂದಿದ್ದರು. ಅದನ್ನು ಕತ್ತರಿಸುವಂತೆ ಮನವಿ ಮಾಡಿದ್ದರು.
ಈ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಶಮಿ ಅಭಿಮಾನಿ ಮನವಿಗೆ ಸ್ಪಂದಿಸಿದ್ದು, ಪ್ರೇಕ್ಷಕರ ಗ್ಯಾಲರಿ ಬಳಿ ಬಂದು ಕೇಕ್ ಕತ್ತರಿಸಿ ಅಭಿಮಾನಿಯ ಆಸೆ ಈಡೇರಿಸಿದ್ದಾರೆ.