Publish Date: Thu, 08 Sep 2022 (08:50 IST)
Updated Date: Thu, 08 Sep 2022 (09:17 IST)
ದುಬೈ: ಧೋನಿ ಬಿಟ್ಟರೆ ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ರೋಹಿತ್ ಶರ್ಮಾ ಎಂದೇ ಹೇಳಲಾಗುತ್ತಿತ್ತು. ಆದರೆ ಏಷ್ಯಾ ಕಪ್ ನಲ್ಲಿ ಅವರ ವರ್ತನೆ ನೋಡಿದರೆ ಅದೆಲ್ಲಾ ಸುಳ್ಳಾಗುತ್ತಿದೆ. ಇದಕ್ಕಿಂತ ವಿರಾಟ್ ಕೊಹ್ಲಿಯೇ ವಾಸಿ ಎನ್ನಲಾಗುತ್ತಿದೆ.
ರೋಹಿತ್ ಏಷ್ಯಾ ಕಪ್ ಕೂಟದಲ್ಲಿ ಮೈದಾನದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಟೀಕೆಗೆ ಗುರಿಯಾಗುತ್ತಿದೆ. ಬೌಲರ್ ಗಳ ಮಾತಿಗೆ ಕಿವಿಯೇ ಕೊಡುತ್ತಿಲ್ಲ. ಅವರಿಗೆ ಸಲಹೆ ನೀಡಲು ಹೋಗಲ್ಲ. ಆಗಾಗ ಕೊಹ್ಲಿ ಬಂದು ಟಿಪ್ಸ್ ಕೊಡಬೇಕಾಗುತ್ತಿದೆ.
ಇನ್ನು, ಕ್ಯಾಚ್ ಬಿಟ್ಟಾಗ ಭುವನೇಶ್ವರ್ ಕುಮಾರ್ ಜೊತೆ ಅವರು ನಡೆದುಕೊಂಡ ರೀತಿ ಅಕ್ಷಮ್ಯವಾಗಿದೆ. ಒಬ್ಬ ನಾಯಕನಾಗಿ ಅವರು ತೋರಬೇಕಾದ ವರ್ತನೆ ಇದಲ್ಲ. ಹೀಗಾಗಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಶುರುವಾಗಿದೆ.