Publish Date: Sun, 20 Jun 2021 (17:27 IST)
Updated Date: Sun, 20 Jun 2021 (17:31 IST)
ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಪಾರ ಭರವಸೆ ಹೊಂದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಕೇವಲ 4 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ.
ಇದರಿಂದಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವು ಅಪ್ಪಟ ರಿಷಬ್ ಅಭಿಮಾನಿಗಳು ಟೀಕಾಕಾರರಿಗೇ ತಿರುಗೇಟು ನೀಡಿದ್ದಾರೆ.
ರಿಷಬ್ ಓವರ್ ರೇಟೆಡ್ ಆಟಗಾರ. ಅವರ ಬಗ್ಗೆ ಅಪಾರ ಭರವಸೆ ಇಟ್ಟಿದ್ದೇ ಬಂತು. ಮಹತ್ವದ ಪಂದ್ಯದಲ್ಲೇ ಕೈ ಕೊಟ್ಟರು ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಇಂದು ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುತ್ತಿದೆಯೆಂದರೆ ಅದಕ್ಕೆ ಕಾರಣ ಈ ಮೊದಲಿನ ಸರಣಿಗಳಲ್ಲಿ ರಿಷಬ್ ಟೀಂ ಇಂಡಿಯಾಕ್ಕೆ ಗೆಲುವಿನ ಇನಿಂಗ್ಸ್ ಆಡಿದ್ದು ಎಂಬುದನ್ನು ಮರೆಯಬಾರದು ಎಂದು ಪರವಾಗಿ ಮಾತನಾಡಿದ್ದಾರೆ.