Publish Date: Sun, 20 Jun 2021 (10:22 IST)
Updated Date: Sun, 20 Jun 2021 (10:24 IST)
ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಸೋತಿದ್ದಾರೆ. ಈ ಮೂಲಕ ಟಾಸ್ ಮೇಲಿನ ಅವರ ದುರಾದೃಷ್ಟ ಮುಂದುವರಿದಿದೆ.
ಈ ಬಗ್ಗೆ ಟ್ವಿಟರಿಗರು ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ಎದುರಾಳಿ ಬದಲಾದರೂ, ಟೂರ್ನಮೆಂಟ್ ಬದಲಾದರೂ ಕೊಹ್ಲಿಯ ಟಾಸ್ ಮೇಲಿನ ಅದೃಷ್ಟ ಬದಲಾಗಿಲ್ಲ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಇದಕ್ಕೂ ಮೊದಲು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಸತತವಾಗಿ ಟಾಸ್ ಸೋತು ಕೊಹ್ಲಿ ದಾಖಲೆಯನ್ನೇ ಮಾಡಿದ್ದರು. ಇದೀಗ ಮತ್ತೆ ಫೈನಲ್ಸ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವಂತಾಗಿದೆ.