Publish Date: Sun, 20 Jun 2021 (09:39 IST)
Updated Date: Sun, 20 Jun 2021 (09:41 IST)
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನವೇ ಮಳೆ ಅಡ್ಡಿಯಾಗಿದ್ದು, ಐಸಿಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುವಂತಾಗಿದೆ.
ಈ ತಂತ್ರಜ್ಞಾನದ ಯುಗದಲ್ಲಿ ಮಳೆ ಬರುವ ಸೂಚನೆ ಮೊದಲೇ ಐಸಿಸಿಗೆ ತಿಳಿದಿರಲಿಲ್ವಾ? ಇಂತಹ ವಾತಾವರಣದಲ್ಲಿ ಈ ಮೈದಾನದಲ್ಲಿ ಪಂದ್ಯ ಆಯೋಜಿಸಿದ್ದೇಕೆ ಎಂದು ಅಭಿಮಾನಿಗಳು ಐಸಿಸಿಗೆ ಹಿಡಿಶಾಪ ಹಾಕಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾದಿದ್ದ ಪಂದ್ಯವಿದು. ಆದರೆ ಅದರ ಸಂತೋಷವನ್ನು ಮಳೆ ಹಾಳು ಮಾಡಿತು. ಇಂತಹ ಮಹತ್ವದ ಪಂದ್ಯವನ್ನು ಇಂತಹ ಸ್ಥಳದಲ್ಲಿ ಏಕೆ ಆಯೋಜಿಸಿದಿರಿ ಎಂದು ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.