Publish Date: Mon, 02 Mar 2020 (17:05 IST)
Updated Date: Mon, 02 Mar 2020 (17:06 IST)
ಕೋಲ್ಕೊತ್ತಾ: ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಗೆಲುವಿಗೆ ಹರಸಾಹಸ ಮಾಡುತ್ತಿದೆ.
ಬಂಗಾಳ ನೀಡಿರುವ 352 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿರುವ ಕರ್ನಾಟಕ ಇತ್ತೀಚೆಗಿನ ವರದಿ ಬಂದಾಗ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ಅನುಭವಿ ಕೆಎಲ್ ರಾಹುಲ್ ಶೂನ್ಯಕ್ಕೆ ನಿರ್ಗಮಿಸಿದ್ದು ಮತ್ತು ನಾಯಕ ಕರುಣ್ ನಾಯರ್ ಕೇವಲ 6 ರನ್ ಗಳಿಸಿ ಔಟಾಗಿದ್ದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇದೀಗ ದೇವದತ್ತ ಪಡಿಕ್ಕಲರ್ 50 ಮತ್ತು ಮನೀಶ್ ಪಾಂಡೆ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಉತ್ತಮ ಜತೆಯಾಟವಾಡಿದರೆ ಮಾತ್ರ ಕರ್ನಾಟಕಕ್ಕೆ ಸೋಲು ತಪ್ಪಿಸಿಕೊಳ್ಳಲು ಸಾಧ‍್ಯ. ಗೆಲುವಿನ ಗುರಿ ತಲುಪಲು ಕರ್ನಾಟಕ ಇನ್ನೂ 256 ರನ್ ಗಳಿಸಬೇಕಿದೆ.