ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾಗೆ ಮಳೆಯೇ ಎದುರಾಳಿ!

Webdunia
ಭಾನುವಾರ, 3 ಜುಲೈ 2022 (16:55 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ನಲ್ಲಿ ಟೀಂ ಇಂಡಿಯಾಕ್ಕೆ ಮಳೆಯೇ ಶಾಪವಾಗಿದೆ. ಇದೀಗ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದ್ದು, ಮಳೆಯೂ ಶುರುವಾಗಿದೆ.

ಇದರಿಂದಾಗಿ ಆಟ ಸ್ಥಗಿತಗೊಳಿಸಲಾಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 416 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ ಮೇಲೆ ಭಾರತೀಯ ಬೌಲರ್ ಗಳು ಅಂಕುಶ ಹಾಕಿದ್ದರು. ಇಂದಿನ ದಿನದಾಟದಲ್ಲಿ ಇನ್ನೇನು ಟೀಂ ಇಂಡಿಯಾ ಆಟಗಾರರು ಮೇಲುಗೈ ಸಾಧಿಸುತ್ತಾರೆನ್ನುವಾಗ ಮಳೆ ಆಗಮನವಾಗಿದೆ.

ಇಂದಿನ ದಿನದಾಟದಲ್ಲಿ ಬೆನ್ ಸ್ಟೋಕ್ 25 ರನ್ ಗಳಿಸಿ ಶ‍್ರಾದ್ಧೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ 91 ರನ್ ಗಳಿಸಿರುವ ಜಾನಿ ಬೇರ್ ಸ್ಟೋ ಮತ್ತು 7 ರನ್ ಗಳಿಸಿರುವ ಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಮೊದಲ ಇನಿಂಗ್ಸ್ ಮುನ್ನಡೆ ದಾಟಲು ಇಂಗ್ಲೆಂಡ್ ಇನ್ನೂ 216 ರನ್ ಗಳಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೂರನೇ ವಿಶ್ವಕಪ್‌ ಕಿರೀಟದ ಕನಸಿನಲ್ಲಿದ್ದ ಫ್ರಾನ್ಸ್‌ಗೆ ನಿರಾಸೆ: ಫೈನಲ್‌ಗೆ ಲಗ್ಗೆ ಹಾಕಿದ ಸ್ಪೇನ್‌

ಇಂವ ಹಿಂಗೇ ಗುರೂ.. ದಿನೇಶ್ ಕಾರ್ತಿಕ್ ಗೆ ಮೈದಾನದಲ್ಲೇ ಕಿಕ್ ಮಾಡಿದ ರೋಹಿತ್ ಶರ್ಮಾ Video

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

ಮುಂದಿನ ಸುದ್ದಿ
Show comments