Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಇಂಗ್ಲೆಂಡ್ ಕ್ರಿಕೆಟಿಗರು ನೀಲಿ ಕ್ಯಾಪ್ ಧರಿಸಿ ಕಣಕ್ಕಿಳಿದಿರುವುದರ ಗುಟ್ಟೇನು?

ಭಾರತ-ಇಂಗ್ಲೆಂಡ್ ಕ್ರಿಕೆಟಿಗರು ನೀಲಿ ಕ್ಯಾಪ್ ಧರಿಸಿ ಕಣಕ್ಕಿಳಿದಿರುವುದರ ಗುಟ್ಟೇನು?
ಬರ್ಮಿಂಗ್ ಹ್ಯಾಮ್ , ಭಾನುವಾರ, 3 ಜುಲೈ 2022 (16:35 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಉಭಯ ತಂಡದ ಆಟಗಾರರು ನೀಲಿ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದಾರೆ.

ಇದಕ್ಕೆ ಕಾರಣ ವಿಶೇಷವಾಗಿದೆ. ಈ ಕ್ಯಾಪ್ ಗಳನ್ನು ಪಂದ್ಯದ ಬಳಿಕ ಒಳ್ಳೆಯ ಉದ್ದೇಶಕ್ಕಾಗಿ ಹರಾಜಿಗಿಡಲಾಗುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಕ್ಯಾಪ್ ಧರಿಸಿ ಆಡಲಾಗುತ್ತಿದೆ.

ಇಂಗ್ಲೆಂಡ್ ನ ದಿಗ್ಗಜ ಕ್ರಿಕೆಟಿಗ ಬಾಬ್ ವಿಲ್ಲಿಸ್ ಇದೇ ರೋಗದಿಂದ ನಿಧನರಾಗಿದ್ದರು. ಹೀಗಾಗಿ ಈ  ರೋಗದ ಬಗ್ಗೆ ಜಾಗೃತಿ ಮೂಡಿಸಲು ಅವರ ಕುಟುಂಬದವರೇ ಅಭಿಯಾನ ನಡೆಸುತ್ತಿದ್ದಾರೆ. ಹೀಗಾಗಿ ಇದಕ್ಕೆ ದೇಣಿಗೆ ಸಂಗ್ರಹಿಸಲು ಕ್ರಿಕೆಟಿಗರೂ ಕೈ ಜೋಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವದೇಶದಲ್ಲಿ ಇಲಿ, ವಿದೇಶದಲ್ಲಿ ಹುಲಿ ರಿಷಬ್ ಪಂತ್