Publish Date: Sun, 03 Jul 2022 (08:20 IST)
Updated Date: Sun, 03 Jul 2022 (09:02 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಗರ ಮೇಲೆ ಟೀಂ ಇಂಡಿಯಾ ಬೌಲರ್ ಗಳು ಸಂಪೂರ್ಣ ನಿಯಂತ್ರಣ ಹೇರಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ದ್ವಿತೀಯ ದಿನದಾಟಕ್ಕೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತ್ತು. ಜಾನಿ ಬೇರ್ ಸ್ಟೋ 12, ಬೆನ್ ಸ್ಟೋಕ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇದಕ್ಕೆ ಮೊದಲು ಅಲೆಕ್ಸ್ ಲೀಸ್ 6, ಜ್ಯಾಕ್ ಕ್ರಾಲೇ 9, ಒಲಿ ಪೋಪ್ 10, ಜೋ ರೂಟ್ 31, ಜ್ಯಾಕ್ ಲೀಚ್ ಖಾತೆ ತೆರೆಯದೇ ಔಟಾದರು.
ಭಾರತದ ಪರ ನಾಯಕ ಜಸ್ಪ್ರೀತ್ ಬುಮ್ರಾ 2, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಇಂಗ್ಲೆಂಡ್ 332 ರನ್ ಗಳ ಹಿನ್ನಡೆಯಲ್ಲಿದೆ.