Publish Date: Sat, 24 Jul 2021 (10:16 IST)
Updated Date: Sat, 24 Jul 2021 (10:18 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಅಂತಿಮ ಏಕದಿನ ಪಂದ್ಯ ಸೋತರೂ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ನಡತೆ ಲಂಕನ್ನರನ್ನು ಕ್ಲೀನ್ ಬೌಲ್ಡ್ ಮಾಡಿದೆ.
ಪಂದ್ಯದ ಬಳಿಕ ಮೈದಾನಕ್ಕಿಳಿದ ದ್ರಾವಿಡ್, ಲಂಕಾ ನಾಯಕ ದಸನು ಶಣಕ ಜೊತೆ ಮಾತುಕತೆ ನಡೆಸಿದ್ದು, ಕೆಲವು ಅಮೂಲ್ಯ ಟಿಪ್ಸ್ ನೀಡಿದ್ದಾರೆ. ದ್ರಾವಿಡ್ ರ ಈ ನಡೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಯುವ ಆಟಗಾರರಿಗೆ ಸಲಹೆ ಕೊಡುವುದರಲ್ಲಿ ಸದಾ ಮುಂದಿರುವ ದ್ರಾವಿಡ್ ತಮ್ಮ ತಂಡಕ್ಕೆ ಸರಣಿ ಗೆಲುವು ಕೊಡಿಸಿದ್ದಲ್ಲದೆ, ಎದುರಾಳಿಗಳಿಗೂ ಸಲಹೆ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.