Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊನೆಯ ಪಂದ್ಯದಲ್ಲಿ ಸೋಲು: ದ್ರಾವಿಡ್ ಮೇಲೆ ಕೆಂಡ ಕಾರಿದ ಸುನಿಲ್ ಗವಾಸ್ಕರ್

ಕೊನೆಯ ಪಂದ್ಯದಲ್ಲಿ ಸೋಲು: ದ್ರಾವಿಡ್ ಮೇಲೆ ಕೆಂಡ ಕಾರಿದ ಸುನಿಲ್ ಗವಾಸ್ಕರ್
ಕೊಲೊಂಬೋ , ಶನಿವಾರ, 24 ಜುಲೈ 2021 (09:04 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ ಗಳಿಂದ ಸೋಲು ಕಂಡಿದೆ. ಆದರೆ ಸರಣಿಯನ್ನು 2-1 ಅಂತದಿಂದ ಗೆದ್ದುಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 225 ರನ್ ಗಳಿಗೆ ಆಲೌಟ್ ಆಯಿತು. ಮಳೆಯಿಂದಾಗಿ ಅಡಚಣೆಯಾದ ಕಾರಣ ಪಂದ್ಯವನ್ನು 47 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 39 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಗೆಲುವು ಪಡೆದುಕೊಂಡಿತು.

ಇನ್ನು, ಒಂದೇ ಪಂದ್ಯದಲ್ಲಿ ಐವರು ಆಟಗಾರರು ಪದಾರ್ಪಣೆ ಮಾಡಿದ್ದರು. ಈ ರೀತಿ ಒಂದೇ ಪಂದ್ಯಕ್ಕೆ ಐವರು ಹೊಸ ಆಟಗಾರರನ್ನು ಅಡಿಸಿದ ಕೋಚ್ ದ್ರಾವಿಡ್ ಮತ್ತು ಟೀಂ ಮ್ಯಾನೇಜ್ ಮೆಂಟ್ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ. ತಂಡದಲ್ಲಿದ್ದಾರೆ ಎಂದು ಎಲ್ಲರಿಗೂ ಅವಕಾಶ ನೀಡಬಾರದು. ನಿಜವಾಗಿಯೂ ಅರ್ಹತೆ ಇದ್ದರೆ ಮಾತ್ರ ಅವಕಾಶ ನೀಡಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೋ ಒಲಿಂಪಿಕ್ಸ್: ಗೆಲುವಿನ ಶುಭಾರಂಭ ಮಾಡಿದ ಭಾರತ ಪುರುಷರ ಹಾಕಿ ಟೀಂ