Publish Date: Sat, 24 Jul 2021 (09:45 IST)
Updated Date: Sat, 24 Jul 2021 (09:45 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಐವರು ಆಟಗಾರರು ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.
ಈ ಮೂಲಕ ಒಂದೇ ಪಂದ್ಯದಲ್ಲಿ ಐವರು ಆಟಗಾರರು ಪದಾರ್ಪಣೆ ಮಾಡಿದ 41 ವರ್ಷದ ಹಿಂದಿನ ದಾಖಲೆ ಮರುಕಳಿಸಿದೆ. 1980 ರಲ್ಲಿ ಇದೇ ರೀತಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಐವರು ಆಟಗಾರರು ಏಕಕಾಲಕ್ಕೆ ಪದಾರ್ಪಣೆ ಮಾಡಿದ್ದರು.
ನಿನ್ನೆಯ ಪಂದ್ಯದಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್, ನಿತೀಶ್ ರಾಣಾ, ಚೇತನ್ ಸಕಾರಿಯಾ, ಸಂಜು ಸ್ಯಾಮ್ಸನ್, ರಾಹುಲ್ ಚಹರ್ ಚೊಚ್ಚಲ ಪಂದ್ಯವಾಡಿದ್ದಾರೆ.