Publish Date: Mon, 24 Jan 2022 (09:47 IST)
Updated Date: Mon, 24 Jan 2022 (09:49 IST)
ಪಾರ್ಲ್: ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಮೂಲಕ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿ ಹೀನಾಯ ಸೋಲು ಕಂಡ ನಾಯಕ ಕೆಎಲ್ ರಾಹುಲ್ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.
ಕೆಎಲ್ ರಾಹುಲ್ ಗೆ ಇದು ನಾಯಕನಾಗಿ ಮೊದಲ ಅನುಭವ. ಅವರಿಗೆ ಸಮಯ ಕೊಡಬೇಕು. ಮುಂದೆ ಸರಿ ಹೋಗುತ್ತಾರೆ ಎಂದು ದ್ರಾವಿಡ್ ಬೆಂಬಲದ ಮಾತನಾಡಿದ್ದಾರೆ.
ರಾಹುಲ್ ಈಗಷ್ಟೇ ನಾಯಕತ್ವ ವಹಿಸಿಕೊಂಡಿದ್ದಾರಷ್ಟೇ. ನನ್ನ ಪ್ರಕಾರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಮುಂದೆ ಅನುಭವ ಪಡೆದಂತೆ ಇನ್ನೂ ಚೆನ್ನಾಗಿ ಮಾಡುತ್ತಾರೆ. ಇದು ಇಡೀ ತಂಡಕ್ಕೆ ಕಣ್ಣು ತೆರೆಸಿದ ಸರಣಿ. ನಮ್ಮ ಸಾಮರ್ಥ್ಯವನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದೆವು. ಹಾಗಾಗಿ ಸರಣಿ ಸೋತೆವು ಎಂದು ದ್ರಾವಿಡ್ ಹೇಳಿದ್ದಾರೆ.