Publish Date: Sun, 23 Jan 2022 (16:50 IST)
Updated Date: Sun, 23 Jan 2022 (16:51 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೆ ವಿರಾಟ್ ಕೊಹ್ಲಿ ಮತ್ತು ಆಫ್ರಿಕಾ ನಾಯಕ ಬವುಮಾ ನಡುವಿನ ಆನ್ ಫೀಲ್ಡ್ ಘರ್ಷಣೆ ಮುಂದುವರಿದಿದೆ.
ಎರಡನೇ ಪಂದ್ಯದಲ್ಲಿ ಇಬ್ಬರೂ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಇದೀಗ ಮತ್ತೆ ಮೂರನೇ ಪಂದ್ಯದಲ್ಲೂ ಅದೇ ಪುನರಾವರ್ತನೆಯಾಗಿದೆ.
ಕೆಎಲ್ ರಾಹುಲ್ ನೇರ ಎಸೆತದಲ್ಲಿ ರನೌಟ್ ಆಗಿ ಬವುಮಾ ಪೆವಿಲಿಯನ್ ಗೆ ಮರಳುತ್ತಿದ್ದಾಗ ಕೊಹ್ಲಿ ನಮ್ಮನ್ನು ಫೀಲ್ಡ್ ನಲ್ಲಿ ಹಗುರವಾಗಿ ಪರಿಗಣಿಸುತ್ತಿದ್ದಾರೆ ಎಂದು ಮಾತಿನಲ್ಲಿ ಕೆಣಕಿದ್ದಾರೆ. ಈ ಮಾತುಗಳು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿವೆ. ಆದರೆ ಈ ಬಾರಿ ಬವುಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.