Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮಂದಬೆಳಕಿನ ಕಾಟದ ಬಗ್ಗೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ಮಂದ ಬೆಳಕಿನಿಂದಾಗಿ ಮೊದಲ ದಿನದಿಂದಲೂ ಬೇಗನೇ ದಿನದಾಟ ಮುಕ್ತಾಯವಾಗುತ್ತಿತ್ತು. ಇಂದೂ ಇದೇ ರೀತಿ ಆಗಿತ್ತು. ಇದರಿಂದಾಗಿ ಎಕ್ಸ್ ಟ್ರಾ ಓವರ್ ಸಿಗದೇ ಭಾರತದ ಗೆಲುವಿನ ಆಸೆಯೂ ಕಮರಿಹೋಯ್ತು. ಇದರ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ಹೀಗಾಗುತ್ತೆ ಎಂದು ಮೊದಲೇ ನಿರೀಕ್ಷೆಯಿತ್ತು. ಮಂದಬೆಳಕಿನ ಬಗ್ಗೆ ನಮಗೆ ನಿರೀಕ್ಷೆಯಿದ್ದಿದ್ದರಿಂದ ಇಂದು ಡ್ರಾ ಆಗಿದ್ದು ನಿರಾಸೆಯಾಗಿಲ್ಲ ಎಂದಿದ್ದಾರೆ. ಈ ಪಂದ್ಯದಲ್ಲಿ ಅಶ್ವಿನ್ ಎರಡೂ ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಿಂದ ಉತ್ತಮ ಪ್ರದರ್ಶನ ತೋರಿದ್ದರು. ಅಲ್ಲದೆ ಕೆಲವು ದಾಖಲೆಗಳನ್ನೂ ಮಾಡಿದ್ದಾರೆ.