ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾರ ಫೀಲ್ಡಿಂಗ್ ಸಾಮರ್ಥ್ಯ ಮತ್ತು ಡ್ರೆಸ್ಸಿಂಗ್ ರೂಂನಲ್ಲಿ ಅವರನ್ನು ಈ ವಿಚಾರಕ್ಕೆ ಯಾವ ರೀತಿ ಕರೆಯುತ್ತಾರೆ ಎಂಬ ವಿಚಾರವನ್ನು ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಲಿಪ್ ನ ಅತ್ಯುತ್ತಮ ಫೀಲ್ಡರ್ ಗಳು. ಅದರಲ್ಲಿ ಕೊಹ್ಲಿ ಅತ್ಯಂತ ಫಿಟ್ ಆಟಗಾರ. ಅವರು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ರೋಹಿತ್ ಕೂಡಾ ಅತ್ಯುತ್ತಮ ಫೀಲ್ಡರ್. ಆದರೆ ಅವರು ಕ್ಯಾಚಿಂಗ್ ಪ್ರಾಕ್ಟೀಸ್ ಗೆ ಹೆಚ್ಚು ಆಸಕ್ತಿ ತೋರಿಸಲ್ಲ.
ಪ್ರಾಕ್ಟೀಸ್ ವೇಳೆ ಹೆಚ್ಚೆಂದರೆ 65-70 ಕ್ಯಾಚ್ ಪ್ರಾಕ್ಟೀಸ್ ಮಾಡುತ್ತಾರಷ್ಟೇ. ಹಾಗಿದ್ದರೂ ಅವರು ಫೀಲ್ಡಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ. ಇದಕ್ಕಾಗಿಯೇ ಅವರನ್ನು ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲರೂ ಸ್ಟಿಕ್ಕೀ ಹ್ಯಾಂಡ್ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.