ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಅನುಷ್ಕಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ್ದಾರೆ. ಇದಕ್ಕೆ ಅನುಷ್ಕಾ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಅನುಷ್ಕಾ ಜೊತೆಗೆ ನದಿ ದಂಡೆಯಲ್ಲಿ ಕುಳಿತಿರುವ ಫೋಟೋ ಪ್ರಕಟಿಸಿರುವ ಕೊಹ್ಲಿ, ನೀನು ನನ್ನ ಜೊತೆಗಿರುವಾಗ ಎಲ್ಲೇ ಹೋದರೂ ನನಗೆ ಮನೆಯ ಫೀಲ್ ಬರುತ್ತದೆ ಎಂದು ಬರೆದುಕೊಂಡಿದ್ದರು.
ಇದಕ್ಕೆ ಅನುಷ್ಕಾ ಪ್ರತಿಕ್ರಿಯಿಸಿದ್ದು, ಓಹ್ ಹೌದಾ, ಅದು ನಿಜಕ್ಕೂ ಗ್ರೇಟ್. ಯಾಕೆಂದರೆ ನೀನು ಮನೆಗೆ ಬರೋದೇ ಅಪರೂಪ ಎಂದು ತಮಾಷೆ ಮಾಡಿದ್ದಾರೆ. ಗಂಡ-ಹೆಂಡಿರ ಈ ಫನ್ನಿ ಸಂಭಾಷಣೆಗೆ ನೆಟ್ಟಿಗರಿಗೂ ಮೆಚ್ಚುಗೆ ವ್ಯಕ್ತವಾಗಿದೆ.