ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಕೊನೆಗೂ ಇದುವರೆಗೆ ತಮಗೆ ಕಂಟಕವಾಗಿದ್ದ ಖ್ಯಾತ ತಾರೆ ನೊಜೊಮಿ ಒಕುಹಾರ ವಿರುದ್ಧ ಗೆಲುವು ದಾಖಲಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಚಾಂಪಿಯನ್ ಆಗಿದ್ದಾರೆ.
ಫೈನಲ್ ನಲ್ಲಿ ಒಕುಹಾರ ವಿರುದ್ಧ 21-19, 21-17 ಅಂತರದಿಂದ ಗೆಲುವು ಸಾಧಿಸಿದ ಸಿಂಧೂ ಹಲವು ದಿನಗಳ ನಂತರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಂಧು ಫಾರ್ಮ್ ಕೊಂಚ ತಗ್ಗಿತ್ತು. ಇದೀಗ ಅವರು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.
ಈ ಮೂಲಕ ವಿಶ್ವ ಟೂರ್ ಫೈನಲ್ಸ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿ ಸಿಂಧು ಅವರದ್ದಾಗಿದೆ. ಕಳೆದ ಬಾರಿ ಸಿಂಧು ಇದೇ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ