ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 320 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಎಂದಿನಂತೆ ಆರಂಭಿಕರು ಕೈ ಕೊಟ್ಟು ಆರಂಭಿಕ ಆಘಾತ ಸಿಕ್ಕಿತು. ಅದಾದ ಬಳಿಕ ಚೇತೇಶ್ವರ್ ಪೂಜಾರ-ವಿರಾಟ್ ಕೊಹ್ಲಿ ಕೊಂಚ ಚೇತರಿಕೆ ನೀಡಿದರು.
ದುರದೃಷ್ಟವಶಾತ್ ಒಳ್ಳೆಯ ಲಯದಲ್ಲಿದ್ದ ಪೂಜಾರ 24 ರನ್ ಗಳಿಸುವಷ್ಟರಲ್ಲಿ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು. ಅದಾದ ಬಳಿಕ ಒಂದಾದ ನಾಯಕ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯಾ ರೆಹಾನೆ ಜೋಡಿ ಭಾರತವನ್ನು ಸುಸ್ಥಿತಿಗೆ ತಲುಪಿಸಿದೆ. ಕೊಹ್ಲಿ 82 ರನ್ ಗಳಿಸಿ ನಾಟೌಟ್ ಆಗಿ ಉಳಿದರೆ ರೆಹಾನೆ 51 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಳೆ ಈ ಜೋಡಿ ಇನ್ನಷ್ಟು ಹೊತ್ತು ಬ್ಯಾಟಿಂಗ್ ಮಾಡಿದರೆ ಟೀಂ ಇಂಡಿಯಾಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಲಭಿಸಬಹುದು. ಇದೀಗ ಭಾರತ 154 ರನ್ ಹಿನ್ನಡೆಯಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ