ಪರ್ತ್: ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್ ನಲ್ಲಿದ್ದರೂ ನಿರಂತರವಾಗಿ ಅವಕಾಶ ಪಡೆಯುತ್ತಿರುವ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಿಗೆದ್ದಿದ್ದಾರೆ.
ಈಗಾಗಲೇ ಕಳಪೆ ಫಾರ್ಮ್ ನಿಂದ ಸಾಕಷ್ಟು ಟ್ರೋಲ್ ಗೊಳಗಾಗಿರುವ ಕೆಎಲ್ ರಾಹುಲ್ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ 2 ರನ್ ಗೆ ಔಟಾದ ಬಳಿಕ ಅಭಿಮಾನಿಗಳ ಪಿತ್ತ ನೆತ್ತಿಗೇರಿದೆ. ಇನ್ನೂ ಈ ಆಟಗಾರನಿಗೆ ಯಾಕೆ ಅವಕಾಶ ಕೊಡಲಾಗುತ್ತಿದೆ. ಭಾರತದಲ್ಲಿ ಪ್ರತಿಭಾವಂತ ಕ್ರಿಕೆಟಿಗರಿಗೆ ಬರವೇ ಎಂಬ ಆಕ್ರೋಶ ಕೇಳಿಬರುತ್ತಿದೆ.
ಮುರಳಿ ವಿಜಯ್ ಗಿಂತ ಹೆಚ್ಚು ಟೀಕೆಗೊಳಗಾಗುತ್ತಿರುವುದು ಕೆಎಲ್ ರಾಹುಲ್. ರಾಹುಲ್ ಕಳೆದ 54 ಇನಿಂಗ್ಸ್ ಗಳಲ್ಲಿ 20 ಬಾರಿ ಸಿಂಗಲ್ ಡಿಜಿಟ್ ಗೆ ಔಟಾಗಿದ್ದಾರೆ. ಇದರಿಂದಾಗಿ ತಂಡ ಪ್ರತೀ ಬಾರಿಯೂ ಸಂಕಷ್ಟಕ್ಕೀಡಾಗುತ್ತಿದೆ.
ಇನ್ನು ಮುಂದೆ ರಾಹುಲ್, ವಿಜಯ್ ಬರೀ ಡ್ರಿಂಕ್ಸ್ ಒಯ್ಯಲು ತಂಡದಲ್ಲಿದ್ದರೆ ಸಾಕು. ಇವರಿಬ್ಬರೂ ಬಹುಶಃ ಪಿಯುಬಿಜಿ ಆನ್ ಲೈನ್ ಗೇಮ್ ಆಡಲು ತಂಡಕ್ಕೆ ಅಗತ್ಯ ವಿರಬೇಕು. ಅದಕ್ಕೆ ಇನ್ನೂ ಉಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೃತೀಯ ಟೆಸ್ಟ್ ವೇಳೆಗೆ ರೋಹಿತ್ ಶರ್ಮಾ, ಪೃಥ್ವಿ ಶಾ ಗಾಯದಿಂದ ಚೇತರಿಸಿಕೊಳ್ಳಲಿದ್ದು, ಆ ಸಂದರ್ಭದಲ್ಲಿ ಇಬ್ಬರೂ ತಂಡದಿಂದ ಕೊಕ್ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ