ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ತೃತೀಯ ದಿನದ ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿದೆ.
ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ನ 320 ರನ್ ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಶತಕದ ಆಸರೆ ಸಿಕ್ಕಿತ್ತು. ಆದರೆ ಇಂದು ಭೋಜನ ವಿರಾಮಕ್ಕೂ ಮೊದಲು ಕೊಹ್ಲಿ ಔಟಾದ ಬಳಿಕ ಭಾರತ ಎರಡು ವಿಕೆಟ್ ತ್ವರಿತ ಗತಿಯಲ್ಲಿ ಕಳೆದುಕೊಂಡು ಮೊದಲ ಇನಿಂಗ್ಸ್ ಮೊತ್ತ ದಾಟಲು ಹರಸಾಹಸ ಪಡುವಂತಾಗಿದೆ. ಭಾರತಕ್ಕೆ ಇನ್ನೂ 74 ರನ್ ಗಳ ಹಿನ್ನಡೆಯಲ್ಲಿದೆ.
ಇಂದು ಬಹುಬೇಗನೇ ರೆಹಾನೆ ಮತ್ತು ಹನುಮ ವಿಹಾರಿ ವಿಕೆಟ್ ಕಳೆದುಕೊಂಡ ಭಾರತಕ್ಕೆ ವಿರಾಟ್ ಕೊಹ್ಲಿ ಶತಕ ಚೇತರಿಕೆ ನೀಡಿತು. ಕಳೆದ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಮಾಡಿದ ಪಾತ್ರವನ್ನು ಈ ಪಂದ್ಯದಲ್ಲಿ ಕೊಹ್ಲಿ ಮಾಡಿದರು. ಸಾಮಾನ್ಯವಾಗಿ ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಕೊಹ್ಲಿ ಇಂದು ಕೊಂಚ ನಿಧಾನಗತಿಯಲ್ಲಿ, ತಾಳ್ಮೆಯ ಆಟವಾಡುವ ಮೂಲಕ ಇನಿಂಗ್ಸ್ ಕಟ್ಟಲು ಮುಂದಾದರು. ಆದರೆ ದುರಾದೃಷ್ಟವಶಾತ್ 123 ರನ್ ಗಳಿಸಿದಾಗ ಔಟಾದರು. ಅವರ ಬೆನ್ನಲ್ಲೇ ಮೊಹಮ್ಮದ್ ಶಮಿ ಕೂಡಾ ಶೂನ್ಯಕ್ಕೆ ನಿರ್ಗಮಿಸಿದರು. ಇದೀಗ ರಿಷಬ್ ಪಂತ್ 14 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ