Publish Date: Sun, 27 Feb 2022 (18:15 IST)
Updated Date: Sun, 27 Feb 2022 (18:17 IST)
ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಮೈದಾನಕ್ಕೆ ಲಂಕಾ ಆಟಗಾರರನ್ನು ಕರೆತರಬೇಕಾಗಿದ್ದ ಬಸ್ ನಲ್ಲಿದ್ದ ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ.
ಲಂಕಾ ಕ್ರಿಕೆಟಿಗರನ್ನು ಹೋಟೆಲ್ ನಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿರುವ ಮೊಹಾಲಿ ಮೈದಾನಕ್ಕೆ ಕರೆತರಲು ನಿಯೋಜಿಸಲಾಗಿದ್ದ ಬಸ್ ನ್ನು ಪೊಲೀಸರು ಎಂದಿನಂತೆ ತಪಾಸಣೆ ಮಾಡುವಾಗ ಗುಂಡುಗಳು ಪತ್ತೆಯಾಗಿವೆ.
ತಕ್ಷಣವೇ ಅಲರ್ಟ್ ಆದ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಬಸ್ ಇದಾಗಿದ್ದು, ಇದರ ಮಾಲಿಕರು, ಚಾಲಕರನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ.