Publish Date: Sun, 27 Feb 2022 (09:40 IST)
Updated Date: Sun, 27 Feb 2022 (09:49 IST)
ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ತಲೆಗೆ ಚೆಂಡು ತಗುಲಿ ಗಾಯಗೊಂಡಿದ್ದಾರೆ. ಈ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಲೆಗೆ ಗಾಯ ಮಾಡಿಕೊಂಡಿರುವ ಕಾರಣಕ್ಕೆ ಇಶಾನ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಕ್ಯಾನಿಂಗ್ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇವರ ಜೊತೆಗೆ ಶ್ರೀಲಂಕಾ ದಿನೇಶ್ ಚಂಡಿಮಾಲ್ ಕೂಡಾ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಇಂದಿನ ಪಂದ್ಯದಲ್ಲಿ ಇಶಾನ್ ಆಡುವುದು ಅನುಮಾನವಾಗಿದೆ.