Publish Date: Tue, 25 Jan 2022 (08:45 IST)
Updated Date: Tue, 25 Jan 2022 (08:46 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ಏಕದಿನ ಸರಣಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಮೇಲೆ ನೆಟ್ಟಿಗರ ಆಕ್ರೋಶ ಮಿತಿ ಮೀರಿದೆ.
ಈ ಸರಣಿಯಲ್ಲಿ ಭಾರತ ಒಂದೇ ಒಂದು ಗೆಲುವು ಕಂಡಿಲ್ಲ. ಸಹಜವಾಗಿ ಆಟಗಾರರ ಸಂಯೋಜನೆ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನವಿತ್ತು. ಒಂದು ವರ್ಗದ ಅಭಿಮಾನಿಗಳಂತೂ ರಾಹುಲ್ ರನ್ನು ಸ್ವಾರ್ಥಿ ಎಂದು ಜರೆದಿದೆ.
ಇದಕ್ಕೆ ಕಾರಣ ಕೊನೆಯ ಪಂದ್ಯದಲ್ಲಿ ತಂಡದಲ್ಲಿ ನಾಲ್ವರು ಆಟಗಾರರನ್ನು ಬದಲಿಸಲಾಗಿತ್ತು. ಆದರೆ ಯುವ, ಇನ್ ಫಾರ್ಮ್ ಬ್ಯಾಟಿಗ ಋತುರಾಜ್ ಗಾಯಕ್ ವಾಡ್ ಗೆ ಒಂದೇ ಒಂದು ಅವಕಾಶ ನೀಡಿರಲಿಲ್ಲ. ಅವರನ್ನು ಕೊನೆಯ ಪಂದ್ಯದಲ್ಲಾದರೂ ಆರಂಭಿಕರಾಗಿ ಕಣಕ್ಕಿಳಿಸಿ ತಾವು ಮಧ‍್ಯಮ ಕ್ರಮಾಂಕದಲ್ಲಿ ಆಡಬಹುದಿತ್ತು. ಆದರೆ ರಾಹುಲ್ ಹಾಗೆ ಮಾಡದೇ ಸ್ವಾರ್ಥಿಯಾದರು ಎಂದು ನೆಟ್ಟಿಗರು ಜರೆದಿದ್ದಾರೆ.