Publish Date: Mon, 24 Jan 2022 (11:33 IST)
Updated Date: Mon, 24 Jan 2022 (08:35 IST)
ಮುಂಬೈ: ಐಪಿಎಲ್ 2022 ಕ್ಕೆ ಇಂಗ್ಲೆಂಡ್ ನ ಕೆಲವು ಸ್ಟಾರ್ ಆಟಗಾರರು ಗೈರು ಹಾಜರಾಗಲಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣವೂ ಆಶ್ಚರ್ಯಕರವಾಗಿದೆ.
ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋ ರೂಟ್, ಮಿಚೆಲ್ ಸ್ಟಾರ್ಕ್ ಐಪಿಎಲ್ ನಲ್ಲಿ ಭಾಗಿಯಾಗದೇ ಇರಲು ನಿರ್ಧರಿಸಿರುವ ಆಟಗಾರರು.
ಜೋ ರೂಟ್ ಈಗಾಗಲೇ ಐಪಿಎಲ್ ಗಿಂತ ತಮಗೆ ದೇಶವೇ ಮುಖ್ಯ ಎಂದು ಘೋಷಿಸಿದ್ದರು. ಆದರೆ ಬೆನ್ ಸ್ಟೋಕ್ಸ್, ಮತ್ತಿತರ ಆಟಗಾರರ ಗೈರು ಅಚ್ಚರಿ ಮೂಡಿಸಿದೆ. ಬೆನ್ ಸ್ಟೋಕ್ಸ್ ಈ ಮೊದಲೂ ಬಯೋ ಬಬಲ್ ನಲ್ಲಿ ಮಾನಸಿಕ ಒತ್ತಡವಾಗುತ್ತದೆ ಎಂಬ ಕಾರಣಕ್ಕೆ ಕೆಲವು ದಿನ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದರು. ಈಗ ಭಾರತದಲ್ಲಿ ನಡೆಯಲಿರುವ ಐಪಿಎಲ್ ನಲ್ಲಿ ಇದೇ ಕಾರಣಕ್ಕೆ ಈ ಕೆಲವು ಆಟಗಾರರು ಗೈರು ಹಾಜರಾಗುವ ನಿರ್ಧಾರಕ್ಕೆ ಬರುವ ಸಾಧ‍್ಯತೆಯಿದೆ.