Webdunia - Bharat's app for daily news and videos

Install App

ನಾಗ್ಪುರ ಟೆಸ್ಟ್: ಸಿಕ್ಕ ಅವಕಾಶವ ಮಿಸ್ ಮಾಡದ ಮುರಳಿ ವಿಜಯ್

Webdunia
ಶನಿವಾರ, 25 ನವೆಂಬರ್ 2017 (11:40 IST)
ನಾಗ್ಪುರ: ಟೀಂ ಇಂಡಿಯಾದಲ್ಲಿ ಈಗ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಿಗುವುದು ಒಂದೇ ಛಾನ್ಸ್. ಅದನ್ನು ತಪ್ಪಿಸಿದರೆ ಮತ್ತೆ ತಂಡದಲ್ಲಿ ತಮ್ಮ ಸ್ಥಾನ ಬೇರೆಯವರದಾಗುತ್ತದೆ ಎನ್ನುವುದು ಮುರಳಿ ವಿಜಯ್ ಗೆ ಚೆನ್ನಾಗಿ ಅರ್ಥವಾಗಿದೆ.
 

ಹಾಗಾಗಿಯೇ ಬಹುದಿನಗಳ ನಂತರ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ತಮಿಳುನಾಡು ಮೂಲದ ಬ್ಯಾಟ್ಸ್ ಮನ್ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ (56) ಗಳಿಸಿ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಎಲ್ ರಾಹುಲ್ ಆರಂಭದಲ್ಲಿಯೇ ನೀಡಿದ್ದ ಆಘಾತದಿಂದ ತಂಡವನ್ನು ಚೇತೇಶ್ವರ ಪೂಜಾರ (33) ಜತೆ ಸೇರಿಕೊಂಡು ಮೇಲೆತ್ತಿದ್ದಾರೆ.  ಇದರೊಂದಿಗೆ ಟೀಂ ಇಂಡಿಯಾ ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.

ಬಹುದಿನಗಳ ನಂತರ ಅವಕಾಶ ಪಡೆದ ಮುರಳಿ ಕೆಲವೊಂದು ಮನಮೋಹಕವೆನಿಸುವ ಶಾಟ್ ಹೊಡೆದು ಮನಸೂರೆಗೊಂಡರು.  ಅವರಿಗೆ ಪೂಜಾರ ತಕ್ಕ ಸಾಥ್ ನೀಡಿದರು. ಎಂದಿನಂತೆ ಡಿಫೆನ್ಸಿವ್ ಹೊಡೆತಗಳಿಗೆ ಹೆಚ್ಚು ಮೊರೆ ಹೋದ ಪೂಜಾರ ತಂಡಕ್ಕೆ ಹೆಚ್ಚಿನ ಡ್ಯಾಮೇಜ್ ಆಗದಂತೆ ನೋಡಿಕೊಂಡಿದ್ದಾರೆ.  ಇದೀಗ ಟೀಂ ಇಂಡಿಯಾಗೆ ಲಂಕಾದ ಮೊದಲ ಇನಿಂಗ್ಸ್ ಮೊತ್ತ ದಾಟಲು ರನ್ ಗಳಿಸಿದರೆ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ಮುಂದಿನ ಸುದ್ದಿ
Show comments